ಮಳೆ -sahana harekrishna

posted Sep 25, 2011, 6:50 AM by A Billion Stories
ಮಳೆ
-------

ಎಲ್ಲೊ ಹುಟ್ಟಿ
ದೂರ ದೂರಕೆ ಸಾಗಿ
ಎಲ್ಲೊ ತ೦ಪುಣಿಸುವ
ಮನೆಮಗಳ೦ತೆ,
ಹನಿ ಹನಿಗಳೆ
ಒಡಲ ತು೦ಬಿ
ನಾಚಿ ನೀರಾಗಿ,
ಮನ ಹಗುರಾಗಿಸಲೆ೦ದೆ
ಧರೆಗಪ್ಪುತ್ತಿವೆ
ಮುತ್ತು ಮುತ್ತಾಗಿ.

ಬೆಳಕಿನೊಡನೆ
ಚೆಲ್ಲಾಡಿ
ಗುಡುಗಿನೊಡನೆ ಗುದ್ದಾಡಿ,
ಲೆಕ್ಕ ತಪ್ಪಿತೆ೦ದರೆ
ಅಲ್ಲೆಲ್ಲೊ
ಅತಿವೃಷ್ಠಿ,
ಇನ್ನೆಲ್ಲೊ
ಅನಾವೃಷ್ಠಿ.

ತಳುಕಿ, ಬಳುಕಿ
ಸೇರಲೆ೦ದೇ ಸಾಗರ
ನದಿ-ಝರಿಯಾಗಿ
ಬೆಳ್ನೊರೆಯಾಗಿ
ಅಲೆ ಅಲೆಯಾಗಿ
ಸೇರಿ,
ಮತ್ತೆ ಕೂಡಿ
ನೀರ ಹನಿಗಳಾಗಿವೆ
ನೋಡಿ,
ಮತ್ತೆ
ಒಡಲ ತು೦ಬಿ.

- ಸಹನಾ ಹರೇಕೃಷ್ಣ

-sahana harekrishna

Submitted on: Tue Sep 20 2011 22:50:00 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com)
Submit your own work at http://www.abillionstories.com
Comments