ಆಲಸ್ಯ -Shilpa Vairagi

posted Sep 25, 2014, 4:55 AM by A Billion Stories   [ updated Sep 25, 2014, 8:23 AM ]

ಓ ಆಲಸ್ಯವೇ ನೀನೇಕೆ ನನ್ನಲ್ಲಿ ಮನೆ ಮಾಡಿರುವೆ ?
ಆಹ್ವಾನವಿಲ್ಲದೆ ನನ್ನ ಮನದಲ್ಲಿ ಬoದು ಕುಳಿತಿರುವೆ?
ನಿನ್ನನ್ನು ಹೊರದೂಡಲು ಎಷ್ಟೆಲ್ಲಾ ಕರಾಮತ್ತು ನಾ ನಡೆಸಿಲ್ಲ?
ನನಗೆ ಗೊತ್ತು ನಿನ್ನಿoದ ನನಗೆ ಎಳ್ಳಷ್ಟೂ ಒಳಿತಿಲ್ಲ.
ಗೊತ್ತಿದ್ದೂ ಗೊತ್ತಿದ್ದೂ ನಿನ್ನ ಬಲೆಯಲ್ಲಿ ಸಿಲುಕಿರುವೆ,
ಪದೇ ಪದೇ ನನ್ನ ಗೆಲುವಿಗೇಕೆ ನೀ ಅಡ್ಡ ಬರುತಿರುವೆ?
ಸಹಿಸಲಾರೆನು ಇನ್ನು, ನಿನ್ನ ಈ ನಿಲುವನು,
ಕೀಳುವೆ ಬುಡಸಹಿತ ಇoದು ನಿನ್ನನು!!

Shilpa Vairagi

Submitted by: Shilpa Vairagi
Submitted on: Tue Sep 23 2014 17:41:41 GMT+0530 (IST)
Category: Original
Language: ಕನ್ನಡ/Kannada


- Read submissions at http://abillionstories.wordpress.com
- Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit