ಶಾಲೆ -Kannika Hegde Fri Nov 02 2012 09:11:47 GMT-0700 (PDT)

posted Nov 2, 2012, 9:11 AM by A Billion Stories
ಶಾಲೆ

ಪೆಟ್ಟು ಕೊಡುವ ಶಾಲೆಗಳನು
ಹುಡುಕಿ ತೆಗೆಯಬೇಕು.
ಪೆಟ್ಟು ಕೊಡದ ಶಾಲೆಗಳಲಿ
ಓದು ಸಾಗಬೇಕು.
'ಕಲಿಕೆಯೊ೦ದು ಹೂವಿನ೦ತೆ' -
ಮಗುವು ತಿಳಿಯಬೇಕು.
ಪಾಠ ಕಲಿತು ಹಗುರವಾಗಿ,
ಹಾಡಿ, ಕುಣಿಯಬೇಕು.
ಬೆತ್ತ ಹಿಡಿದು ಬರುವ ಮೇಷ್ಟ್ರು
ಮನೆಗೆ ಹೋಗಬೇಕು.
ಬೈದು-ಹೊಡೆದು ಕಲಿಸುವವರ
ಜೈಲಿಗಟ್ಟಬೇಕು.

- ಕನ್ನಿಕಾ ಹೆಗಡೆ
-Kannika Hegde

Submitted on: Tue Oct 30 2012 23:06:02 GMT-0700 (PDT)
Category: Already Published Work
Language: Kannada
Copyright: -
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit
Comments