ದಾರಿ -Kannika Hegde

posted Jun 23, 2011, 4:38 AM by A Billion Stories

ಬೆಳಗಿನ೦ತೆ
ಸ೦ಜೆ ಬರಲಿ
ಬಿಸಿಲಿನ೦ತೆ
ತ೦ಪು ಇರಲಿ
ಸೂರ್ಯ ಉರಿದು
ಚ೦ದ್ರ ನಲಿದು
ಬದುಕು ಹಸನವಾಗಲಿ.
ಹಾಲ ಹಸುಳೆ
ಅತ್ತು ನಕ್ಕು
ಮುದಿ ಜೀವವ
ತಣಿಸಲಿ
ನಿನ್ನೆ ಮತ್ತೆ
ಕರೆವುದಿಲ್ಲ
ನಾಳೆ ಎನೊ
ಅರಿವಿಗಿಲ್ಲ
ಸಿಟ್ಟು ಸಿಡಿದ
ದಾರಿಯಲ್ಲೇ
ಹೂವು ತ೦ಪು
ಸೂಸುತಿರಲಿ
ಗಾಳಿಯಲ್ಲಿ
ಸರಿವ ಮಾತು
ಕವಿತೆಯಾಗಿ
ಹಾಡುತಿರಲಿ.

- ಕನ್ನಿಕಾ ಹೆಗಡೆ.
-Kannika Hegde

Submitted on: Wed Jun 22 2011 23:09:15 GMT-0700 (PDT)

Category: Original

Language: Kannada
Comments