ಸಂಗಾತಿ -Sahana Harekrishna

posted Jun 21, 2011, 8:15 AM by A Billion Stories   [ updated Jun 21, 2011, 8:17 AM ]
ಆಗೊಮ್ಮೆ
ಈಗೊಮ್ಮೆ
ನೆನಪಿನ ಸುರುಳಿ
ಬಿಚ್ಚಿ ಅಲೆಯ೦ತೆ
ಅಪ್ಪಳಿಸಿ
ಹೀಗೇಕೆ ಕಾಡುವೆ ?
ಮರೆಯಲು
ಬಯಸದಿ ಮನ
ಸಹಿಸಲಾರೆ ನೋವು,
ಹಚ್ಚ ಹಸಿರಾಗಿವೆ
ಏಕೆ ನಯನಗಳಲಿ
ಆ ದಿನಗಳು !
ದೂರವಾದರು ನೀ
ಆ ಪ್ರೀತಿ, ನೆನಪು
ಅನುಕ್ಷಣವು ನನ್ನ ಸ೦ಗಾತಿ
ಕಣ್ಣೀರ ಧಾರೆ ಕೂಡ
ಹೋದೆಯೆಲ್ಲಿಗೆ ಎ೦ದು
ಕೇಳಲಾರೆ, ಬರುವಿಯಲ್ಲ
ದಿನವೂ ನೆನಪಿನಲ್ಲಿ
ನನ್ನೀ ನೋವಿನಲ್ಲಿ, ಅಳುವಿನಲ್ಲಿ,
ಈ ಮೌನದಲ್ಲಿ,
ನನ್ನ ಪ್ರತಿ ಹೆಜ್ಜೆಯಲ್ಲಿ
ಇರುವಿಯಲ್ಲ ನೀ,
ಸ೦ಗಾತಿಯಾಗಿ,
ಜೀವನ - ಸ೦ಗಾತಿಯಾಗಿ.

ಸಹನಾ ಹರೇಕೃಷ್ಣ

-sahana harekrishna

Submitted on: Mon Jun 20 2011 23:38:57 GMT-0700 (PDT)

Category: Original

Language: Kannada
Comments