ನನ್ನ ಕವಿತೆ (Nanna Kavithe) -Bhuvi

posted Dec 28, 2015, 11:11 PM by A Billion Stories
ಕವಿಯಾಗಲೆಂದು ಬರೆಯಲಿಲ್ಲ ನಾ ಕವನಗಳನ್ನ
ನಿನ್ನ ಮರೆಯಲೆಂದೇ ಗೀಚಿದೆ ಈ ಅಕ್ಷರಗಳನ್ನ
ಪ್ರಯತ್ನಿಸುತ್ತಿರುವೆ ಮರೆಯಲು ನಿನ್ನ ನೆನಪುಗಳನ್ನ
ಆದರೇನು ಮಾಡಲಿ...ಈ ಅಕ್ಷರಗಳಿಗೆ
ಸ್ಫೂರ್ತಿ ನೀನೇ ಅಲ್ಲವೇ ಗೆಳೆಯಾ?
ಮನದಲ್ಲೇ ಪ್ರೀತಿಸಿದೆ ಅಂದಿನಿಂದ...
ಹೇಳಲಾರದ ಪುಟ್ಟದೊಂದು ಹೆದರಿಕೆಯಿಂದ
ಹೇಳು, ನಿನಗೆಂದೂ ಅರ್ಥವಾಗಲಿಲ್ಲವೇ
ಈ ನನ್ನ ಮನದ ಒಲವು ?
ತುಂಬಾ ದೂರವಾಗಿರುವೆ ಇಂದು ನೀ ನನ್ನಿಂದ
ಅದಕ್ಕಿಂದು ಈ ಕವನ ಬಂದಿದೆ ನನ್ನೀ ಮನದಿಂದ

-Bhuvi

Photo by:
Submitted by: Bhuvi
Submitted on: Thu Sep 17 2015 14:19:48 GMT+0530 (IST)
Category: Original
Language: ಕನ್ನಡ/Kannada


- Read submissions at http://abillionstories.wordpress.com
- Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit

Comments