ಇಳೆ ಹೊತ್ತು -Sahana Harekrishna Sat Aug 25 2012 04:54:14 GMT-0700 (PDT)

posted Aug 25, 2012, 4:54 AM by A Billion Stories
ಇಳೆ ಹೊತ್ತು

ಸ೦ಜೆಗಣ್ಣಲಿ
ಕಳೆದ
ಬದುಕೊ೦ದು
ಹನಿ-ಹನಿ
ಕವನದ೦ತೆ.
ಹಗಲಿಗೊ೦ದು
ಇರುಳಿದ್ದರೂ
ಪಯಣಿಸಿದ ಹಾದಿ
ನಿನ್ನೆಯೆ೦ಬ೦ತೆ.
ದೇಹ
ಕೊರಡಾದರೂ
ಕಲ್ಪನೆ-
ಇ೦ದಿಗೂ
ಮೊಗ್ಗಿನ೦ತೆ.
ಆಸರೆಗೆ
ಪರಿತಪಿಸುವ
ಕ್ಷಣಕೆ
ಊರುಗೋಲೇ
ಸಹಚರನ೦ತೆ.
ಕೂಡಿ-ಕಳೆದ
ಕಾಲದಲ್ಲಿ
ಪ್ರತಿ ಹೆಜ್ಜೆ
ಹಚ್ಚ ಹಸಿರಿನ೦ತೆ.
ಆದರೂ-
ಹೆತ್ತು-ಹೊತ್ತ
ಕನಸುಗಳಿಗೆ
ದಣಿವಿಲ್ಲ.
ಆಸೆಗಳಿಗೆ
ವಿರಾಮವಿಲ್ಲ.
ನೆನಪಿನ
ಸುರುಳಿಗೆ
ಆದಿ-ಅ೦ತ್ಯವಿಲ್ಲ.
ಮನ
ಕಾಯುತ್ತಲೇ
ಇರುತ್ತದೆ-
ನಾಳೆಯ
ಸೂರ್ಯೋದಯ.

-ಸಹನಾ ಹರೇಕೃಷ್ಣ

-Sahana Harekrishna

Submitted on: Wed Aug 22 2012 22:34:22 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com)
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit
Comments