ಕಾಲದ ಮುಖಗಳು -Sahana Harekrishna Fri Nov 09 2012 18:10:50 GMT-0800 (PST)

posted Nov 9, 2012, 6:10 PM by A Billion Stories
ಕಾಲದ ಮುಖಗಳು

ಅದೇ ಆ ಮುಖ
ನನ್ನ ಎತ್ತಿ ಆಡಿಸಿದ
ಅದೇ ಆ ಮುಖ,
ನನ್ನ ಕೈಹಿಡಿದು
ನಡೆಸಿದ ಮುಖ,
ನಾ ಅತ್ತಾಗ ತಾ ನಕ್ಕು
ನಗಿಸಿದ ಮುಖ,
ನಾ ಬಿದ್ದು ಎದ್ದಾಗ
ನೊ೦ದ ಮುಖ,
ನಾ ಗೆದ್ದು ಬ೦ದಾಗ
ಹರ್ಷಿಸಿದ ಮುಖ,
ನಾ ಸೋತಾಗ
ಅತ್ತ ಮುಖ,
ನನ್ನ ನಾ ಮರೆತಾಗ
ಕನ್ನಡಿಯಾದ ಮುಖ,
ಸ೦ಜೆಗಣ್ಣಲೂ
ನೆರಳಾದ ಮುಖ,
ಕೊನೆಗೊಮ್ಮೆ ಛಾಯೆಯ
ಚಿತ್ರದಲಿ ಮರೆಯಾದ
ಮುಖ !!!

-ಸಹನಾ ಹರೇಕೃಷ್ಣ

-Sahana Harekrishna

Submitted on: Thu Nov 08 2012 06:02:58 GMT-0800 (PST)
Category: Already Published Work
Language: Kannada
Copyright: -
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit
Comments