ನಿನ್ನಿಂದಲೇ -ADVAITH

posted Jan 4, 2015, 4:44 AM by A Billion Stories   [ updated Jan 4, 2015, 4:50 AM ]
ಹರೆಯದಲಿ ಮೂಡಿತ್ತು ತುಸು ಕಾವ್ಯಾಶೆ
ನನಗಿತ್ತು ಸ್ವರ್ಗ ಲೋಕವ ಮುಟ್ಟೂ ಅಭಿಲಾಷೆ
ತಿಳಿದೂ-ತಿಳಿಯದೂ ಎತ್ತಿದೆ ಸಾಹಿತ್ಯದ ಅಸ್ತ್ರವ
ಅರಿಯದೆ ಅದರ ಮೂಲ ಶಾಸ್ತ್ರವ
ತಿಳಿಯಬಯಸಿದ್ದು ಮಾತ್ರ ನಿನ್ನಿಂದಲೆ......

ನಡೆಯುತ್ತಿದೆ ಒಂಟಿದಾರಿಯಲಿ ಅತಿತ್ತ ತಿರುಗದೆ ತಲೆಯತ್ತಿ ಮದದಲಿ
ಮೌಢ್ಯತೆಯ ಮಡಿಳೂಲ್ ಬೀರುತ ಅಹಂಕಾರ
ಕೊನೆಗೂ ತಿಳಿಯಿತು ನನ್ನ ಸುತ್ತಲಿದದ್ದು ಬರಿ ಅಂಧಕಾರ
ತಿಳಿದದ್ದು ಮಾತ್ರ ನಿನ್ನಿಂದಲೆ...ನಿನ್ನಿಂದಲೆ.......

ಹಬ್ಬುವಾಗ ವಿಶ್ಟಿತೆಯ ಹೊಳಪು
ಎಲ್ಲಿಹುದು ಅಂಧಕಾರದ ನೆನಪು
ಬಿತ್ತದೆ ಬೀಜವ,ಚಿಗುರಿನ ಕನಸು ಕಂಡವ ನಾ ಮರುಳ
ದಾಟಬಲ್ಲನೆ ಇಚ್ಚಿಸಿದ ಇಹಲೋಕವು ಹಚ್ಚಿರುವ ಈ ಇರುಳ
ಮೂಗಿನ ತೂಕವ ತುಟಿ ಹೇಳಬಲ್ಲದೆ
ನೋವಿನ ಬಾರವ ಹೃದಯ ಅಳೆಯಬಲ್ಲದೆ
ಏರಲೆತ್ನಿಸಿದೆ ಎಟುಕದ ಏಣಿ
ತಿರುಗದಂತಾಗಿದೆ ಈ ಬದುಕಿನ ದೋಣಿ
ಮೂಡ ಬಹುದು ಆಶಯವು ಮಾತ್ರ ನಿನ್ನಿಂದಲೆ......

ಕಾವ್ಯ ಸಂತೆಯಲಿ ಜರುಗಿತೆ ನನ್ನ ಮೌನದ ವ್ಯಾಪಾರ
ವಿನಮ್ರತೆಯಲು ಸಡಿಲತೆಯಿಲ್ಲದ ಆತ್ಮದಳು ಹದುಗಿದೆ
ನೋವಿನ ಮಹಾಪೊರ
ಮುರಿಯಬೇಕು ಮೌನವ ಮಾತ್ರ ನಿನ್ನಿಂದಲೆ......

ಬದುಕಿನ ಸುಮಧುರತೆ ಮೇಲಿದೆ ನನಗೆ ಅಭಿಮಾನ
ಮತ್ತೆಕಟ್ಟ ಬಯಸುವೆ ಸುಂದರ ಕನಸಿನ ಅಭಿಯಾನ
ನಿನ್ನ ಜೂತೆಯಲಿ ಮತ್ತೂಂದು ಹೊಸ ಪ್ರಯಾಣ
ನನಸಾಗುವುದು ಕನಸು ಮಾತ್ರ ನಿನ್ನಿಂದಲೆ
-ADVAITH
 


Photo by:
Submitted by: ADVAITH
Submitted on: Fri Jan 02 2015 16:27:55 GMT+0530 (IST)
Category: Original
Language: ಕನ್ನಡ/Kannada


- Read submissions at http://abillionstories.wordpress.com
- Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit

Comments