ಅಲ್ಲಿ ಇಲ್ಲಿ ಎಲ್ಲೀ...!? -Shri.Ginde

posted Jul 16, 2016, 8:38 AM by A Billion Stories
ಕಳೆಯೂತಿರಲು ದಿನಗಳು,
ನೆಮ್ಮದಿಯ ಹುಡುಕಾಟದಲ್ಲಿ.
ಸಿಗುವುದೇ ಸಂತೋಷ, ಸುಖ ಶಾಂತಿ
ನಮ್ಮ ಮತ್ತು ನಮ್ಮವರ ಬದುಕಿನಲ್ಲಿ,
ಯಾವರೀತಿ ಬದುಕಬೇಕೆಂದು
ಯಾರು ಹೇಳಿಕೊಡರಿಲ್ಲಿ
ಅದನ್ನು ಕಲಿಯಬೇಕು ನಾವಿಲ್ಲಿ..
ಗೆಳೆಯ ಹೇಳಿದ ಚುಟುಕು ನೆನಪಾಯಿತು ನನಗಿಲ್ಲಿ ,
ಜೀವನವೇ ಒಂದು ಆಟ
ಸೋಲು ಗೆಲುವಿನ ಕಾದಾಟ
ಪ್ರೀತಿ ವಿಶ್ವಾಸಗಳ ಹುಡುಕಾಟ
ಬಂಧ ಸಂಬಂಧಗಳ ತೊಳಲಾಟ
ಆಸೆ ಆಕಾಂಕ್ಷೆಗಳ ಗೋಳಾಟ
ಮೂರು ಗೆರೆಗಳ ಹಣೆಬರಹದ ನಾಟಕ.
ಹಾಗೆ, ಆಡಬೇಕು ಪ್ರತಿಯೊಬ್ಬನಿಲ್ಲಿ...
ಬದುಕಲೂ ಗೆಲ್ಲಲೆ ಬೇಕು ನೀನಿಲ್ಲಿ...
ಗೆಲ್ಲಲೆ ಬೇಕು ನೀನಿಲ್ಲಿ...!

-Shri.Ginde

Photo by:
Submitted by: Shri.Ginde
Submitted on: Mon Jun 27 2016 14:12:19 GMT+0530 (IST)
Category: Original
Language: ಕನ್ನಡ/Kannada


- Read submissions at http://abillionstories.wordpress.com
- Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit

Comments