ಸದ್ದಿಲ್ಲದ ದನಿಗಳು -Sahana Harekrishna

posted May 25, 2011, 6:57 AM by A Billion Stories
ಸದ್ದಿಲ್ಲದ ದನಿಗಳು

ಸದ್ದುಗದ್ದಲದಲಿ
ಸದ್ದಿಲ್ಲದೆ ಮಲಗಿವೆ
ದನಿಗಳು.
ಬೆಳಕು ಕಣ್ಬಿಟ್ಟಾಗ
ಗೊತ್ತು ಗುರಿಯಿರದೆಡೆ
ಮನ
ಸಾಗುವಾಗ-
ಮಾತೇಕೆ ಮೌನದಲಿ
ಕರಗುತ್ತಿದೆ.
ಇ೦ಚರದ
ಗೂಡಿನಲಿ
ಕಲರವದ ಗಾನದಲಿ
ದನಿಯದೇ
ತಾಳ
ತಪ್ಪಿದ೦ತಿದೆ.
ಗಿಜಿಗುಟ್ಟುವ
ಹಾದಿಯಲಿ,
ಸರಿಗಟ್ಟದ
ಬದುಕಿನಲಿ,
ಮೌನವೇ
ಗೆಲುವನ್ನು
ಸಿ೦ಗರಿಸಿದೆ.

- ಸಹನಾ ಹರೇಕೃಷ್ಣ

-Sahana Harekrishna

Submitted on: Mon May 23 2011 23:49:49 GMT-0700 (PDT)
Comments