ಬಾನಿನಲ್ಲಿ ಚಂದ್ರ -Shri.Ginde

posted Jun 25, 2016, 5:29 AM by A Billion Stories
ಬಾನಿನಲ್ಲಿ ಮೋಡವೂ ಕವಿದಿರಲೂ
ಕಾಣದಿರಲೂ ಚಂದಿರ ಸುತ್ತಲೂ ಎಲ್ಲೂ
ಆವರಿಸಿದೆ ಸುತ್ತಲೂ ಕರಿ ನೆರಳು, ಛಾಯೆ...
ಬಲ್ಲವರು ಯಾರು ಈ ಮಾಯೆ..!?

ಮರು ಬರುವನೇ ಚಂದಿರ ಬಾನಿನಲ್ಲಿ!
ಪ್ರಶ್ನಿಸಲೀ ನಾನು ಯಾರ,ಯಾರಲ್ಲೀ ?
ಬಿಡಿಸುವವರಾರೂ ಈ ಒಗಟ...!!

ಹ್ಹ.. ಹ್ಹ.. ಹ್ಹ..! ನೆನಪಾಯಿತು ಗಾದೆ,
ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ.
ಬದುಕೆಂಬ ಈ ನಾಲ್ಕು ದಿನಗಳ ಮಾಯದಾಟ,
ಕಲಿವರಿಲ್ಲಿ ಎಲ್ಲರೂ ಜೀವನಪಾಠ.
ಸುಖ- ದುಃಖಗಳ ಸಮ್ಮಿಲನ,
ನೋವು- ನಲಿವಿನ ಕೂಟ..

ಅರೆ ರೇ..!? ಕಾಲವು ಸರಿಯಿತು ,
ಮೋಡವೂ ಕರಗಿತು,
ಬೆಳಕು ಹರಿಯಿತು ನೀ.. ಕೇಳಿಲ್ಲಿ...
ಚಂದಿರನಿಲ್ಲದಿರೆನಂತೆ,
ಮೂಡಣದಿ ಬಂದಿಹ ನೇಸರ ನೋಡಲ್ಲಿ.. ನೀ.. ನೋಡಲ್ಲಿ...!!!
— ಶ್ರೀಧರ ಗಿಂಡೆ


-Shri.Ginde

Photo by:
Submitted by: Shri.Ginde
Submitted on: Tue May 17 2016 14:40:45 GMT+0530 (IST)
Category: Original
Language: ಕನ್ನಡ/Kannada


- Read submissions at http://abillionstories.wordpress.com
- Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit

Comments