ಬೆ೦ಗಳೂರಿನ ನಾಯಿಗಳು. -sahana harekrishna

posted Dec 7, 2011, 5:45 AM by A Billion Stories
ಇವು ಬೆ೦ಗಳೂರಿನ
ನಾಯಿಗಳು.
ನಿಮ್ಮ ಮನೆಯ
ತ೦ಗಳು ತಿ೦ದು
ಪ್ರೀತಿ ಉ೦ಡು
ಬೆಳೆದವಲ್ಲ !
ಮಾ೦ಸದ೦ಗಡಿಯ
ತು೦ಡು ತಿ೦ದು,
ನಿಮ್ಮ ಮನೆಗೆ ತಮ್ಮ
ನೆರಳೂ ಸೋಕದೆ
ರಸ್ತೆಯನ್ನೆ ಮನೆಯಾಗಿಸಿ
ಬೆಳೆದ ನಾಯಿಗಳು.
” ನಾಯಿ ಕ೦ಡರೆ,
ಒಟಕ್ಕಿತ್ತು,
ಕಲ್ಲು ಹೊಡಿ”
ಎ೦ದು ನೀವೇ
ಹೇಳಿಕೊಟ್ಟ ವಾಕ್ಯವನ್ನು
ಚಾಚೂ ತಪ್ಪದೆ
ಪಾಲಿಸುವ ನಿಮ್ಮ
ಮಕ್ಕಳನ್ನು ವೈರಿಗಳ೦ತೆ
ಹೆದರುವ ಅವುಗಳ
ರಕ್ತದಲ್ಲೂ ಅ೦ಜಿಕೆ
ಸೇರಿಹೋಗಿದೆ.
ಅಲ್ಲೆಲ್ಲೊ ರೋಗಗ್ರಸ್ತ
ನಾಯಿ ಕಚ್ಚಿದರೂ
ಸಮಸ್ತ ಬೆ೦ಗಳೂರಿನ
ನಾಯಿಗಳೆಕೆ
ರಕ್ತದಾಹಿಗಳು ? !
ಒಮ್ಮೆ ಪ್ರೀತಿ ಕೊಟ್ಟು
ನೋಡಿ,
ಈ ಬೆ೦ಗಳೂರಿನ
ನಾಯಿಗಳಿಗೆ.
ದುಪ್ಪಟ್ಟು ಪ್ರೀತಿ
ನಿಮಗೆ ಗ್ಯಾರ೦ಟಿ.
ಎಕೆ೦ದರೆ,
ಅವು ನಮ್ಮ೦ಥೆ
ಮನುಷ್ಯರಲ್ಲ !!!

ಸಹನಾ ಹರೇಕಷ್ಣ

-sahana harekrishna

Submitted on: Tue Nov 22 2011 21:35:11 GMT-0800 (PST)
Category: Original
Language: Kannada
Copyright: A Billion Stories (http://www.abillionstories.com)
Submit your own work at http://www.abillionstories.com
Comments