ಚಂದ್ರ ಹಾಗೂ ಕಲಾವಿದನ ಕುಂಚ. -priyanka_rosenknospe

posted Jan 21, 2015, 5:43 PM by A Billion Stories
ನಾನು ನಾನಲ್ಲ..
ನಾನು ಬಾನಲ್ಲಿ ನಗುವ ಚಂದಿರನ
ಸೊಗಸಾದ ಪದಗಳಲ್ಲಿ ಸೆರೆಹಿಡಿವ ಕವಿ...
ನಾನು ನಾನಲ್ಲ,
ನಾನು ಇಳೆಯ ಹಸಿರು ಕಾನನವನ್ನು
ಹಸನು ಮಾಡುವ ಸೂರ್ಯ ಕಿರಣಗಳನ್ನು
ಕುಂಚದಲ್ಲಿ ಹಿಡಿದಿಡುವ ಚಿತ್ರಗಾರ ...
ನಾನು ನಾನೇನಲ್ಲ,
ನಾನು ನಿಸರ್ಗದ ಸವಿಯನ್ನು
ಕಣ್ಣಂಚಿನಲ್ಲಿ ಸೆರೆಹಿಡಿವ ನಾನೇ,
ಕಲಾವಿದ. . . .
priyanka_rosenknospe
 


Photo by: Priyanka
Submitted by: priyanka_rosenknospe
Submitted on: Tue Jan 13 2015 19:46:03 GMT+0530 (IST)
Category: Original
Language: ಕನ್ನಡ/Kannada


- Read submissions at http://abillionstories.wordpress.com
- Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit

Comments