ಎಲ್ಲರಿಗೂ ಗೊತ್ತಿರುವ ಒಂದು ವಿಷಯ: -Shri.Ginde

posted Jun 25, 2016, 6:11 AM by A Billion Stories
ಎಲ್ಲರಿಗೂ ಗೊತ್ತಿರುವ ಒಂದು ವಿಷಯ
ಒಪ್ಪಿಕೊಳ್ಳಲು ಸಂಕೋಚ ಯಾಕೋ ಸಂಶಯ
ನಾನು ಸರಿಯಿಲ್ಲ, ನಾವು ಸರಿಯಿಲ್ಲ
ನಮ್ಮ ಸುತ್ತಲೂ ಏನು ಸರಿಯಿಲ್ಲ
ಕುಲಗೆಟ್ಟಿರುವ ದೇಶ
ಹದಗೆಟ್ಟಿರುವ ಮನುಷ್ಯ
ಏನೂ ತೋಚದೆ ಕಂಗಾಲು ಆಗಿರುವ ಜೀವನ
ಕಲ್ಲು ಆಗಿರುವ ದೇವರು
ಮಂದ ಆಗಿರುವ ಬುದ್ಧಿ
ನೋಡುಗರ ದೃಷ್ಟಿ ದಾಟಿ ಬೀಳುತ್ತಿರುವ
ಮಾತಿನ ಛಾವಟಿ:
ಏಲೇ ಮನಸೇ ನಿಲ್ಲಬಲ್ಲೇಯಾ ಇದನ್ನೆಲ್ಲ ನೀ ಮೆಟ್ಟಿ.
ನಿನಗೆ ನೀನೇ ಸಾಟಿ ಎಂದು ಹೇಳುತ್ತಾ.,
ನನ್ನೊಳ ಮನಸ್ಸಿನ ಆಳದ ಸತ್ಯ...
ಕಾಡುತ್ತಿದೆ ನನ್ನ ದಿನನಿತ್ಯ...

— ಶ್ರೀಧರ ಗಿಂಡೆ

-Shri.Ginde

Photo by:
Submitted by: Shri.Ginde
Submitted on: Fri May 20 2016 16:19:01 GMT+0530 (IST)
Category: Original
Language: ಕನ್ನಡ/Kannada


- Read submissions at http://abillionstories.wordpress.com
- Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit

Comments