ಏನಾಗಲಿ ನಾನು ಎಂದುಕೊಳಲು ಎಲ್ಲಿಂದಲೋ ಬಂದ ಹಾಡು -Madhu Sat Jun 09 2012 05:12:41 GMT-0700 (PDT)

posted Jun 9, 2012, 5:12 AM by A Billion Stories
ಕವಿಯಾಗಲೇನು
ಬಣ್ಣವನು ಬಣ್ಣಿಸಲು
ಮಗುವಾಗಲೇನು
ಮಡಿಲಿನಲಿ ಪವಡಿಸಲು
ನದಿಯಾಗಲೇನು
ಕಣ್ಣಲ್ಲಿ ನೀರಾಗಲು
ರವಿಯಾಗಲೇನು
ಹಣೆಯಲ್ಲಿ ರಾರಾಜಿಸಲು
ಎನಾಗಲೇಳು ನಾನು
ನಿನ್ನ ಸಂಗ ಬಿಡದಿರಲು

ಗುಳಿಯಾಗಲೇನು
ಕೆನ್ನೆಯಲಿ ಸುಳಿದಾಡಲು
ಮಿಂಚಾಗಲೇನು
ತುಟಿಯಲ್ಲಿ ನಲಿದಾಡಲು
ಅಪರಂಜಿಯಾಗಲೇನು
ಕೊರಳಲ್ಲಿ ಸರವಾಗಲು
ಮುತ್ತು ನಾನಾಗಲೇನು
ಮೂಗನ್ನು ಸಿಂಗರಿಸಲು
ಎನಾಗಲೇಳು ನಾನು
ಜೊತೆಯಲ್ಲೇ ಜೀವಿಸಲು
-Madhu

Submitted on: Wed Jun 06 2012 01:03:49 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com)
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit
Comments