Kannada Poems
-
ಚಹಾ... 11.01.2021 01:25:46
ಆಹಾ ಆಹಾ ಆಹಾ!!ಚಹಾ ಚಹಾ ಚಹಾ !!ಏನು ನಿನ್ನ ಈ ಮ್ಯಾಜಿಕ್ಕು,ಕುಡಿದೊಡನೆ ಕೊಡುವೆ ನೀ ಕಿಕ್ಕು.ಚಳಿಗಾಲದಲ ...
Posted Jan 10, 2021, 11:55 AM by A Billion Stories
-
ಇಂಗ್ಲೀಷ್ ಹುಚ್ಚು: -Shilpa V
ಇಂಗ್ಲೀಷ್ ವ್ಯಾಮೋಹಕ್ಕೆ ಸಿಕ್ಕ ನಾನು ಕನ್ನಡವನು ತೊರೆದೆ,ಹಗಲಿರುಳೂ ಇoಗ್ಲೀಷ್ - ಇoಗ್ಲೀಷ್ ಎoದು ಕನವರ ...
Posted Jan 10, 2021, 11:25 AM by A Billion Stories
-
ಅಮ್ಮ, ಶಾಲೆಗೆ ನಾಳೆ ಹೋಗುವೆ -Madhubala
ಅಮ್ಮ, ಶಾಲೆಗೆ ನಾಳೆ ಹೋಗುವೆಇಂದು ಮಳೆಯೊಡನೆ ಆಡಬೇಕುಪುಟ್ಟ ಕಾಗದದ ದೋಣಿಗಳಿವೆಅವು ತೇಲುವ ...
Posted Jan 30, 2019, 9:55 AM by A Billion Stories
-
ಪಿಸುಮಾತು -Aa.Ja.Ka
ಮನಸಿಗೇಕೆ ತಾಕಿತು ನಿನ್ನ ಮೌನದ ಮಾತಿನ ಅರ್ಥ ?ಮನದಿಯಲ್ಲೇಕೆ ಉಳಿಯಿತು ನೀನೇ ಬೇಕೆಂಬ ಸ್ವ ...
Posted Oct 19, 2018, 6:11 AM by A Billion Stories
-
ಕಾಣ್ಮೆ... 09.09.2018 10:53:04
ಕನಸು ಕಾಣುವುದು ಎಲ್ಲರಿಗೂ ಇಷ್ಟ .ಆದರೆ ನನಸಾಗಲು , ಪಡಬೇಕು ಸ್ವಲ್ಪ ಕಷ್ಟ .ಇದ್ದರೆ ನಿನ್ನಲ್ಲಿ ವಿಚಾರಗಳು ಸ ...
Posted Sep 8, 2018, 10:23 PM by A Billion Stories
| |
posted Jan 10, 2021, 11:55 AM by A Billion Stories
ಆಹಾ ಆಹಾ ಆಹಾ!! ಚಹಾ ಚಹಾ ಚಹಾ !! ಏನು ನಿನ್ನ ಈ ಮ್ಯಾಜಿಕ್ಕು, ಕುಡಿದೊಡನೆ ಕೊಡುವೆ ನೀ ಕಿಕ್ಕು. ಚಳಿಗಾಲದಲ್ಲಿ ನೀನೇ ನನಗೆ ದಿಕ್ಕು ಬಿಟ್ಟರೆ ನಿನ್ನಾ, ಹಿಡಿಯುವದು ನನಗೆ ತುಕ್ಕು ಸುಕ್ಕುಗಟ್ಟುವುದು ನನ್ನ ಲುಕ್ಕು ಆಹಾ ಆಹಾ ಆಹಾ !! ಚಹಾ ಚಹಾ ಚಹಾ !!
-Shilpa V
Photo by: - Submitted by: Shilpa V Submitted on: Wed Sep 02 2020 04:21:21 GMT+0530 (IST) Category: Original Language: ಕನ್ನಡ/Kannada
- Read submissions at http://abillionstories.wordpress.com - Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit
|
posted Jan 10, 2021, 11:25 AM by A Billion Stories
ಇಂಗ್ಲೀಷ್ ವ್ಯಾಮೋಹಕ್ಕೆ ಸಿಕ್ಕ ನಾನು ಕನ್ನಡವನು ತೊರೆದೆ, ಹಗಲಿರುಳೂ ಇoಗ್ಲೀಷ್ - ಇoಗ್ಲೀಷ್ ಎoದು ಕನವರಿಸಿದೆ. ಆ ಪುಸ್ತಕ ಈ ಪುಸ್ತಕ ಎನುತ ಇಂಗ್ಲೀಷನೆ ಜಾಲಾಡಿದೆ, ಆದರೂ, ಕನ್ನಡದಂಥ ಸುಗಂಧವನು ಇಂಗ್ಲೀಷ್ ನಲ್ಲಿ ಕಾಣದಾದೆ. ಹೀಗೆ ಮೈಮರೆತಿದ್ದ ನಾನು ಇಂಗ್ಲೀಷ್ ಗುಂಗಿನಿಂದ ಹೊರಬಂದೆ, ಮತ್ತೆ ಕನ್ನಡದ ಮಡಿಲಿಗೆ ಶರಣಾದೆ!!
-Shilpa V
Photo by: - Submitted by: Shilpa V Submitted on: Wed Sep 02 2020 04:14:33 GMT+0530 (IST) Category: Original Language: ಕನ್ನಡ/Kannada
- Read submissions at http://abillionstories.wordpress.com - Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit
|
posted Jan 30, 2019, 9:55 AM by A Billion Stories
ಅಮ್ಮ, ಶಾಲೆಗೆ ನಾಳೆ ಹೋಗುವೆ ಇಂದು ಮಳೆಯೊಡನೆ ಆಡಬೇಕು ಪುಟ್ಟ ಕಾಗದದ ದೋಣಿಗಳಿವೆ ಅವು ತೇಲುವುದನ್ನು ನೋಡಬೇಕು ಚಪ್ಪಾಳೆ ತಟ್ಟಿ ಕುಣಿಯಬೇಕು
ಅಮ್ಮ, ಶಾಲೆಗೆ ನಾಳೆ ಹೋಗುವೆ ಇಂದು ಹಸಿರು ಗದ್ದೆಯಲ್ಲಿ ಓಡಬೇಕು ಕೆಸರಿನಲಿ ಬಿದ್ದು ಉರುಳಾಡಬೇಕು ಬಣ್ಣ ಬಣ್ಣದ ಪಾತರಗಿತ್ತಿಗಳಿವೆ ಅವು ಹಾರುವುದನ್ನು ನೋಡಬೇಕು
ಅಮ್ಮ, ಶಾಲೆಗೆ ನಾಳೆ ಹೋಗುವೆ ಇಂದು ತೋಟದಲ್ಲಿ ಆಡಬೇಕು ಮರಗಳ ಜೊತೆ ಗೆಳೆತನ ಬೆಳೆಸಬೇಕು ರುಚಿರುಚಿಯಾದ ಹಣ್ಣುಗಳಿವೆ ಅವುಗಳ ಸವಿಯನ್ನು ಎಲ್ಲರಿಗೂ ಹಂಚಬೇಕು
ಅಮ್ಮ, ಶಾಲೆಗೆ ಹೋಗಲೇ ಬೇಕೇ? ಶಾಲೆಗೆ ಹೋಗುವುದಿಲ್ಲವಲ್ಲ ಆಡು-ಮೇಕೆ ನಿಸರ್ಗವೇ ಹೇಳಿಕೊಡುವುದು ಪಾಠ ಕಲಿಕೆಯ ಜೊತೆಯಲ್ಲೇ ಸಾಗುವುದು ನನ್ನ ಆಟ ಅಮ್ಮ, ಇನ್ನು ಬೇಡವೇ ಬೇಡ ಶಾಲೆಯ ಕಾಟ!
-Madhubala
Photo by: Submitted by: Madhubala Submitted on: Mon Jan 21 2019 12:53:50 GMT+0530 (IST) Category: Original Language: ಕನ್ನಡ/Kannada
- Read submissions at http://abillionstories.wordpress.com - Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit
|
posted Oct 19, 2018, 6:11 AM by A Billion Stories
ಮನಸಿಗೇಕೆ ತಾಕಿತು ನಿನ್ನ ಮೌನದ ಮಾತಿನ ಅರ್ಥ ? ಮನದಿಯಲ್ಲೇಕೆ ಉಳಿಯಿತು ನೀನೇ ಬೇಕೆಂಬ ಸ್ವಾರ್ಥ ? ಶಾಶ್ವತವಾಗಿ ನಿನ್ನನ್ನು ಮನದ ಮರೆಗೆ ನೂಕುವಾಗ ನೀ ಏಕೆ ಜಿಗಿದೆ ಮನದ ಮೋಡಕ್ಕೆ ನನ್ನನ್ನು ನನ್ನಿಂದಲೇ ಎಳೆದು ಏಕೆ ನೂಕಿದೆ ಪ್ರೀತಿಯ ಮಾರ್ಗಕ್ಕೆ ?
-
Photo by: Submitted by: Aa.Ja.Ka Submitted on: Thu Apr 19 2018 23:23:24 GMT+0530 (IST) Category: Semi-Fiction-A real life incident mixed with imagination Language: ಕನ್ನಡ/Kannada
- Read submissions at http://abillionstories.wordpress.com - Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit
|
posted Sep 8, 2018, 10:23 PM by A Billion Stories
ಕನಸು ಕಾಣುವುದು ಎಲ್ಲರಿಗೂ ಇಷ್ಟ . ಆದರೆ ನನಸಾಗಲು , ಪಡಬೇಕು ಸ್ವಲ್ಪ ಕಷ್ಟ . ಇದ್ದರೆ ನಿನ್ನಲ್ಲಿ ವಿಚಾರಗಳು ಸ್ಪಷ್ಟ , ಆಗದು ನಿನ್ನ ಶ್ರಮ ಎoದಿಗೂ ನಷ್ಟ . ಒದಗಿ ಬರಬೇಕೆಂದರೆ ನಿನಗೆ ಅದೃಷ್ಟ , ತ್ಯಜಿಸು ಎಲ್ಲ ದುಶ್ಚಟ , ಮಾಡು ಕೆಲಸ ವಿಶಿಷ್ಟ , ಪಡಿಸು ಹಿರಿಯರನು ಸಂತುಷ್ಟ . ನೆರವಾಗು ಜನರಿಗೆ ತೊರೆಯಲು ಸಂಕಷ್ಟ . ಚಂಚಲ ಮನಸನು ಚೂಟಿ ಹಾಕಿ ಉಹಾಪೋಹಗಳಿಗೆ ಕಿವಿಗೊಡದೆ ನಿರರ್ಗಳವಾಗಿ ನಿರ್ಭಯದಿಂದ ಮುನ್ನುಗ್ಗು, ನಿನ್ನ ನಡೆನುಡಿಯಲ್ಲಿದ್ದರೆ ಶಿಷ್ಟ , ಈ ಜಗದಲಿ ನೀನಾಗುವೆ ಉತ್ಕೃಷ್ಟ .. ಹೌದು , ಕನಸು ಕಾಣುವುದು ಎಲ್ಲರಿಗೂ ಇಷ್ಟ . ನನಸಾಗಬೇಕೆಂದರೆ ಸ್ವಲ್ಪ ಕಷ್ಟ . . ಸ್ವಲ್ಪ ಕಷ್ಟ . .
-Shilpa Manjunath
Photo by: Submitted by: Shilpa Manjunath Submitted on: Mon Jun 19 2017 03:27:38 GMT+0530 (IST) Category: Original Language: ಕನ್ನಡ/Kannada
- Read submissions at http://abillionstories.wordpress.com - Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit
|
posted Sep 8, 2018, 12:11 AM by A Billion Stories
ಕಾಣ್ಮೆ - Vision: ------------------------------------------------------- ಕನಸು ಕಾಣುವುದು ಎಲ್ಲರಿಗೂ ಇಷ್ಟ . ಆದರೆ ನನಸಾಗಲು , ಪಡಬೇಕು ಸ್ವಲ್ಪ ಕಷ್ಟ . ಇದ್ದರೆ ನಿನ್ನಲ್ಲಿ ವಿಚಾರಗಳು ಸ್ಪಷ್ಟ , ಆಗದು ನಿನ್ನ ಶ್ರಮ ಎoದಿಗೂ ನಷ್ಟ . ಒದಗಿ ಬರಬೇಕೆಂದರೆ ನಿನಗೆ ಅದೃಷ್ಟ , ತ್ಯಜಿಸು ಎಲ್ಲ ದುಶ್ಚಟ , ಮಾಡು ಕೆಲಸ ವಿಶಿಷ್ಟ , ಪಡಿಸು ಹಿರಿಯರನು ಸಂತುಷ್ಟ . ನೆರವಾಗು ಜನರಿಗೆ ತೊರೆಯಲು ಸಂಕಷ್ಟ . ಚಂಚಲ ಮನಸನು ಚೂಟಿ ಹಾಕಿ ಉಹಾಪೋಹಗಳಿಗೆ ಕಿವಿಗೊಡದೆ ನಿರರ್ಗಳವಾಗಿ ನಿರ್ಭಯದಿಂದ ಮುನ್ನುಗ್ಗು, ನಿನ್ನ ನಡೆನುಡಿಯಲ್ಲಿದ್ದರೆ ಶಿಷ್ಟ , ಈ ಜಗದಲಿ ನೀನಾಗುವೆ ಉತ್ಕೃಷ್ಟ .. ಹೌದು , ಕನಸು ಕಾಣುವುದು ಎಲ್ಲರಿಗೂ ಇಷ್ಟ . ನನಸಾಗಬೇಕೆಂದರೆ ಸ್ವಲ್ಪ ಕಷ್ಟ . . ಸ್ವಲ್ಪ ಕಷ್ಟ . .
-Shilpa Manjunath
Photo by: Submitted by: Shilpa Manjunath Submitted on: Mon Jun 19 2017 03:27:38 GMT+0530 (IST) Category: Original Language: ಕನ್ನಡ/Kannada
- Read submissions at http://abillionstories.wordpress.com - Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit
|
posted Sep 5, 2018, 12:11 AM by A Billion Stories
ಭುಜಕ್ಕೆ ಕಿಟಕಿಯ ಆಸರೆ. ಮನದ ತುಮುಲಕ್ಕೆ ಪದಗಳ ಆಸರೆ ಎಂದೋ ಪ್ರಾರಂಭವಾದ ಹಾಡಿಗೆ ಪಲ್ಲವಿಯ ಆಸರೆ ಎಂದೋ ಮುಗಿಯುವ ಹಾಡಿಗೆ ಕಾಲನ ಆಸರೆ ಕ್ಷಣಿಕ ಸ್ವಾತಂತ್ರ್ಯಕ್ಕೆ ಸ್ವರಗಳ ಆಸರೆ.
ಸೂರೆ ಹೋದ ಪಟ್ಟಣದ ದಂತಕಥೆಯಂತೆ ಹಿಡಿಯಷ್ಟು ಜೀವ... ಮುಡಿದಷ್ಟು ನಲಿವು ಮೃದಂಗದ ತಕಧಿಮಿಯಲ್ಲಿ ನಿನ್ನ ಉಸಿರಿನ ನೆರಳು ಕಂಡೂ ಕಾಣದಂತೆ ತಾಳ ತಪ್ಪುವ ಬೆರಳುಗಳು .
ಯಾಕೆ ಬರಲಿಲ್ಲ ಮತ್ತೆ ಆ ದಿನ ಎಂಬ ಆಕ್ಷೇಪ ಥಟ್ಟನೆ ಎದ್ದ ಸಣ್ಣ ಅಪಸ್ವರಕೆ ನವಿರಾದ ಎಚ್ಚರಿಕೆ ಧ್ವನಿಯ ಕಂಪನ ಇಂದಿಗೂ ಗುಪ್ತಗಾಮಿನಿ ಅಲ್ಲಿರಲಿ ಅದು ರಾಗಕ್ಕೆ ನಿಲುಕದ ಭಾವವಾಗಿ.
ಕನಸಿನಂತೆ ಕಳೆದು ಹೋದ ಆ ಮುಸ್ಸಂಜೆಯ ಛಾಯೆ ಮರುಭೂಮಿಯಲ್ಲಿ ಚಿಗುರಿದ ಜೀವಸೆಲೆ ಇನ್ನೆಲ್ಲಿ ಅಲೆಮಾರಿ ಬದುಕು ಸಾಕು ಬಿಡು ಹುಡುಕಾಟ ಅತ್ತಿತ್ತ ಪರದಾಡದಿರು ನೀನಿರುವಲ್ಲೇ ಸುಮುಧುರ ಗಾನ.
ನೀರಲ್ಲಿ ಮೀನಿನ ಹೆಜ್ಜೆ ಕಂಡವರುಂಟೇ ಕಾಡು ವನದಲ್ಲಿ ಜೋಗಿಯ ಜಾಡು ಹಿಡಿದವರುಂಟೇ ನಿನ್ನೆಯ ಹಾಡುಗಳು ಕನ್ನಡಿಯೊಳಗಿನ ಗಂಟು ಅಳಿಸಿ ಹೋದ ಪದಗಳು... ಹಾಳು ಮರೆವು.
-Daya Bhat
Photo by: Submitted by: Daya Bhat Submitted on: Tue May 02 2017 13:53:02 GMT+0530 (IST) Category: Original Language: ಕನ್ನಡ/Kannada
- Read submissions at http://abillionstories.wordpress.com - Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit
|
posted Sep 4, 2018, 8:50 PM by A Billion Stories
ಅಂಗಳ ತುಂಬಾ ಅರಳು ಮಲ್ಲಿಗೆಯ ಘಮಲು ತೊಟ್ಟಿಲ ಕಂದಮ್ಮನ ಕಾಲ್ಗೆಜ್ಜೆಯಲಿ ಅಚ್ಚರಿಯ ಸೆಳಕು. ಹಗಲು ರಾತ್ರಿಗಳು ಒಂದರ ಅಂಚಿನಲ್ಲಿ ಮತ್ತೊಂದು ಹೆಣೆದುಕೊಂಡು ಒಂದರಂತೆ ಇನ್ನೊಂದು... ಮತ್ತೊಂದು ... ಕಾಲ ಬಳಿ ಋತುಗಳ ರಾಶಿ.
ಬಿಸಿಲಿಗೆ ಮೈಯೊಡ್ಡಿದ ಬಿದಿರಿನ ಚಾಪೆ ಹೊರಗೆ ಸುಟ್ಟು ಬೂದಿಯಾಗುತ್ತ ಒಳಗೆ ಕಾಮಾಲೆ ಕಣ್ಣೊರೆಸುತ್ತ... ನಿಂತ ನೀರು ನಿಂತಲ್ಲಿಯೇ .
ಕೈಗಳು ತೂಗುತಿವೆ ಬರಿದಾದ ತೊಟ್ಟಿಲನು. ಕಂದಮ್ಮ ಹೊರಜಾರಿ ಯುಗಗಳೇ ಆದವು. ಮನಸು ಮರ್ಕಟ ... ಅಂತರಂಗ- ಸಂತೆ ಪೇಟೆಯ ಗೋಜಲು.
ಮನದಾಚೆ ಹೆಜ್ಜೆಗಳು ಮುಂದೆ ಮುಂದೆ. ಇಲ್ಲಿ ಏನೋ ಹಿಂಜರಿತ. ಹೊಸ್ತಿಲಾಚೆ ಎಲ್ಲವೂ ಶಾಂತ ಸರೋವರ . ಇಲ್ಲಿ ಕಡಲ ಮೊರೆತ .
ಅರ್ಧ ಬೆಳಗುವ ಚಂದ್ರ ... ಅರ್ಧ ಮಿಣುಕುವ ತಾರೆ ಅರ್ಥವಾಗದ ಅಪೂರ್ಣತೆ.ಅರ್ಥವಿಲ್ಲದ ಹೋರಾಟ .
-Daya Bhat
Photo by: Submitted by: Daya Bhat Submitted on: Tue May 02 2017 09:48:53 GMT+0530 (IST) Category: Original Language: ಕನ್ನಡ/Kannada
- Read submissions at http://abillionstories.wordpress.com - Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit
|
posted Sep 2, 2018, 2:05 PM by A Billion Stories
ಬಾಳಿನ ಸಿಹಿ-ಕಹಿ ಒ೦ದಾಗಿ ಸವಿಯಲು ಯುಗಾದಿ, ಚೈತ್ರಮಾಸದ ಗಾನವು ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು, ನವೋದಯ ಈ ಯುಗಾದಿ, ಹೊಸ ವಷ೯ವು
ಚೆಲ್ಲಲೀ ನಮ್ಮ ಬಾಳಲಿ ಹೊಸ ಬೆಳಕನು ಬೇವು-ಬೆಲ್ಲದ ಮಿಶ್ರಣವು, ತು೦ಬಲಿ ಬಾಳಲಿ ಹೊಸರುಚಿಯನು ತಿ೦ದು ನಲಿಯುವಾ ಸ೦ತಸದಲಿ; ಮರೆಯುವಾ ಮತ್ಸರ ನಿಮಿಷದಲಿ ಸೌರಮಾನವಿರಲಿ, ಚ೦ದ್ರಮಾನವಿರಲಿ; ಪವೋ೯ಲ್ಲಾಸ ಹರಡಿದೆ ಎಲ್ಲೆಡೆ ಕೈ-ಬಿಸಿ ಹೊಸ ಸ೦ವತ್ಸರ ಕರೆದಿದೆ ತನ್ನೆಡೆ.
ಯುಗಾದಿ ಋತುಗಳ ವೈಭವವು ವಷ೯ಕ್ಕೊ೦ದು ಹೊಸತು ಜಗದ ಜನನವು ಮರೆಸಲು ದುಃಖ - ದುಮ್ಮಾನಗಳನು ತೊಳೆದಿದೆ ಒಳಮನಸಿನ ಕೊಳಕನು
ಬೆರೆಯಲಿ ಕಹಿ ನೆನಪುಗಳು, ಸಿಹಿ ಸ೦ತೋಷದಲಿ ಬೆರೆಯಲಿ ಮನಸುಗಳು, ಋತುಗಳ ಸಮ್ಮಿಲನದಲಿ ಕರುಣಿಸಲಿ ಬಾಳಲಿ ಸುಖ: -ಶಾ೦ತಿಯನು ಯುಗಾದಿ, ಚೈತ್ರಮಾಸದ ಗಾನವು ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು, ನವೋದಯ ಈ ಯುಗಾದಿ, ಹೊಸ ವಷ೯ವು
ಹೊಸವಷ೯ದ ಆದಿ ಆರ೦ಭಿಸುವಾ ಹಷ೯ದಿ ಹಳೆಯದೆಲ್ಲ ಕೂಡಿ- ಕೂಡಿ ಹೊಸ ಅನುಭವ ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು, ನವೋದಯ, ಹೊಸ ವಷ೯ವು "ಯುಗಾದಿ" ಯುಗಾದಿ.!
-Shri.Ginde
Photo by: Submitted by: Shri.Ginde Submitted on: Fri Apr 14 2017 15:09:44 GMT+0530 (IST) Category: Original Language: ಕನ್ನಡ/Kannada
- Read submissions at http://abillionstories.wordpress.com - Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit
|
posted Apr 19, 2017, 8:14 PM by A Billion Stories
ಹುಡುಕುತಿರುವೆನು ನನ್ನನ್ನು ನಾನು ನನ್ನೊಳಗೆ ಕೂಗುತಿರಲು ನನ್ನ ಮೌನವು ನನಗೆ, ಕನಸಾಗಿವೆ. ಕನಸುಗಳು, ನನ್ನ ಕನಸೊಳಗೆ; ಏಲ್ಲೋ ಬಂದೀಯಾಯಿತು ನನ್ನ ಮಾತು, ಮೌನವೆ ಆವರಿಸಿತು ನನ್ನೊಳಗೆ.
ಕಾರಣವ ತಿಳಿಯೆನು ಯಾವ ದೆಸೆಯಿ೦ದ, ಬಿಡಿಸೆನ್ನನು ಈ ಬಂದೀಖಾನೆಯಿ೦ದ ಕರೆದುಕೊ೦ಡು ಹೋಗೆನ್ನನು ಆ ಕಡಲೆಡೆಗೆ ಕೂಗುತಿರಲು ನಾನು ನನ್ನೊಳಗೆ; ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ.
ಸೋತಿರುವೆ ನಾನು ಮೌನದಿ ಶರಣಾಗಿ, ಮುನಿಸಿರುವೆ ನಾನು ನನ್ನೊಳಗೆ ಚುಚ್ಚುತಿರಲು ಆ ನಿ೦ದನೆಗಳು ಮುಳ್ಳಿನ೦ತೆ, ನಿ೦ದನೆಗಳೇಕೆ ಎಲ್ಲೆಡೆ ನನ್ನನೆ ಮುತ್ತಿಕೊ೦ಡ೦ತೆ. ಬಿಡಿಸೆನ್ನನು ಈ ಮುಳ್ಳಿನಾ ಪೊದೆಯಿ೦ದ ಕರೆದುಕೊ೦ಡು ಹೋಗೆನ್ನನು ಆ ಕಡಲೆಡೆಗೆ, ಕೂಗುತಿರಲು ನಾನು ನನ್ನೊಳಗೆ; ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ
ತು೦ಡು,ತು೦ಡಾದ ಈ ಕ್ಷಣವು, ಸಮಯವು; ಒಡೆದ ಗಾಜಿನ೦ತೆ, ಮಿಸುಕಾಡುತ್ತಿರುವೆ ನಾನು ಗಾಳಕ್ಕೆಸಿಕ್ಕ ಮೀನಿನ೦ತೆ, ನೆನಪಿನ ಅ೦ಗಳವು ನಾನು ತೆರೆದಿಡಲು ಪುಸ್ತಕದ ಪುಟದ೦ತೆ, ಬತ್ತಿಹೋಗಿದೆ ಅ೦ಗಳದ ಕೆರೆಯು ಮರಳುಗಾಡಿನ೦ತೆ
ಬಿಡಿಸೆನ್ನನು ಈ ಮೌನದಾ ಗಾಳದಿಂದ, ಕರೆದುಕೊ೦ಡು ಹೋಗೆನ್ನನು ಆ ಸು೦ದರ ಕಡಲೆಡೆಗೆ, ನಿಸಗ೯, ಪ್ರೀತಿಯ ಆ ಸವಿಗಾನದ ಮಾತಿನೆಡೆಗೆ, ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ...!
-Shri.Ginde
Photo by: Submitted by: Shri.Ginde Submitted on: Thu Apr 13 2017 15:49:16 GMT+0530 (IST) Category: Original Language: ಕನ್ನಡ/Kannada