ಮಲೆನಾಡ ಮೆರುಗು -Priyanka_Rosenknospe

posted Dec 31, 2014, 10:02 AM by A Billion Stories
ಮಲೆನಾಡು ಬೆಟ್ಟ ಗುಡ್ಡಗಳ ಪ್ರದೇಶ. ಈ ಪ್ರದೇಶದಲ್ಲಿ ಸದಾಕಾಲ ಮಳೆ ಸುರಿಯುತಿರುತ್ತದೆ.
ಚಿಕ್ಕಮಗಳೂರು, ಶಿವಮೊಗ್ಗ , ಮೂಡಿಗೆರೆ, ಸಕಲೇಶಪುರ, ಉತ್ತರ ಕನ್ನಡ, ಮಡಿಕೇರಿ ಈ ಪ್ರದೇಶದ ಮುಖ್ಯ ಜಾಗಗಳು."ಮಳೆಗಾಲ" ಅಂದೊಡನೆ ನೆನಪಾಗುವುದು ಎಡಬಿಡದೆ ಸುರಿಯುವ ಮಳೆ, ಎಲ್ಲೆಲ್ಲೂ ಕೆಂಪು ನೀರು, ತುಂಬಿ ಹರಿಯುವ ಹಳ್ಳ-ಕೊಳ್ಳ, ಹೊಳೆ, ಹಚ್ಚ ಹಸಿರಿನ ಕಾಡು, ಮರ ಗಿಡಗಳು, ಜಲಪಾತ, ಹಿತವಾದ ಚಳಿ. ಇದು ಮಲೆನಾಡಿನ ಮಳೆಗಾಲದ ನಿತ್ಯ ಬದುಕು.ರಾಸ್ಟ್ರ ಕವಿ ಕುವೆಂಪುರವರ ಎರಡು ಕಾದಂಬರಿಗಳು – ಕಾನೂರು ಸುಬ್ಬಮ್ಮ ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದುಮಗಳು , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು. ಇದು ಕಥೆ -ಕಾದಂಬರಿ ಅನ್ನುವುದಕ್ಕಿಂತ ಹೆಚ್ಚಾಗಿ ಮಲೆನಾಡಿನ ಸಹಜ ಸುಂದರ ಬದುಕನ್ನು ಕಣ್ಮುಂದೆ ಬಿಡಿಸಿಡುವ ಸುಂದರ ಚಿತ್ತಾರ..
ಕಣ್ಣ್ಮನ ಸೆಳೆವ ಜಲಧಾರೆ,ಕಾನನ, ಬೆಟ್ಟ,ಬಾನು ತುಂಬಿದ ಬೆಚ್ಚನೆ ಸೂರ್ಯ...
ಮನವನ್ನು ತಣಿಸಿ,ರಂಜಿಸುತ್ತದೆ..

-Priyanka_Rosenknospe

Photo by:
Submitted by: Priyanka_Rosenknospe
Submitted on: Sat Dec 27 2014 16:08:48 GMT+0530 (IST)
Category: Original
Language: ಕನ್ನಡ/Kannada


- Read submissions at http://abillionstories.wordpress.com
- Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit

Comments